ಹುಚ್ಚು ಕ್ರೇಜ್ ನಿಂದ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವವರು ನಮ್ಮ ನಡುವೆ ಸಾಕಷ್ಟು ಸಿಗುತ್ತಾರೆ. ಇಲ್ಲೊಬ್ಬ ಮದುವೆ ಮಾಡಿಕೊಳ್ಳಲು ಹೊರಟ ವಧು ವಿಚಿತ್ರ ಕಾರಣಕ್ಕೆ ಪೊಲೀಸರಿಂದ ದಂಡನೆಗೆ ಒಳಗಾಗಿದ್ದಾಳೆ.
ವಿವಾಹ ನಡೆಯುವ ಸ್ಥಳಕ್ಕೆ ಹೊರಟ 23 ವರ್ಷದ ವಧು ಎಸ್ಯುವಿಯ ಬಾನೆಟ್ ಮೇಲೆ ಕುಳಿತು ಶೋ ಕೊಡುತ್ತಾ ರಸ್ತೆಯಲ್ಲಿ ಸಾಗಿರುವುದು ಪ್ರಕರಣ ದಾಖಲಾಗಲು ಕಾರಣವಾಗಿದೆ.
ಪುಣೆ-ಸಾಸ್ವಾಡ್ ರಸ್ತೆಯ ಡೈವ್ ಘಾಟ್ ಉದ್ದಕ್ಕೂ ಆಕೆ ಪ್ರಯಾಣಿಸುತ್ತಿದ್ದಾಗ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಡುಗನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು…!
ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಡಿ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದೇ ರೀತಿ, ವಧುವಿನ ಸ್ಟಂಟ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚಿತ್ರ ವಿಚಿತ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುವತಿ ಚಲಿಸುವ ವಾಹನದ ಬಾನೆಟ್ ಮೇಲೆ ಕುಳಿತಿದ್ದಾಗ ಮೋಟಾರ್ ಸೈಕಲ್ ನಲ್ಲಿದ್ದ ವ್ಯಕ್ತಿಯು ವಿಡಿಯೋವನ್ನು ಚಿತ್ರೀಕರಿಸಿದ್ದಾನೆ.
ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಪ್ರಕಾರ ಯುವತಿ, ವಿಡಿಯೋಗ್ರಾಫರ್ ಮತ್ತು ಚಾಲಕ ಸೇರಿದಂತೆ ವಾಹನದಲ್ಲಿದ್ದ ಇತರ ವ್ಯಕ್ತಿಗಳಿಗೆ ನಾವು ದಂಡ ವಿಧಿಸಿದ್ದೇವೆ ಮತ್ತು ಭಾರತೀಯ ದಂಡ ಸಂಹಿತೆ, ವಿಪತ್ತು ನಿರ್ವಹಣಾ ಕಾಯ್ದೆ, ಮಹಾರಾಷ್ಟ್ರ ಕೋವಿಡ್ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದ್ದು ಅವರ್ಯಾರೂ ಸಹ ಮಾಸ್ಕ್ ಧರಿಸಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.