ಲಖನೌ: ಮದುವೆ ಮನೆಯಲ್ಲಿ ಕಿರಿಕಿರಿಗಳು ಆಗುವುದು ಸಾಮಾನ್ಯ. ಎಷ್ಟೋ ಸಮಯದಲ್ಲಿ ಚಿಕ್ಕ ಪುಟ್ಟ ವಿಷಯಕ್ಕೆ ಮದುವೆ ಮುರಿದುಬೀಳುವುದು ಇದೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯಿಂದ ವರನ ಕಡೆಯವರು ತನಗೆ ಕೊಟ್ಟ ಲೆಹಂಗಾ ಅಗ್ಗದ ಬೆಲೆಯದ್ದು ಎನ್ನುವ ಕಾರಣಕ್ಕೆ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ!
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಖನೌದಲ್ಲಿ. ಮದುವೆಗೆ ಕೆಲ ದಿನಗಳಿರುವಾಗ ವರನ ತಂದೆತಾಯಿ ವಧುವಿಗೆಂದು 10 ಸಾವಿರ ರೂಪಾಯಿ ಬೆಲೆ ಬಾಳುವ ಲೆಹೆಂಗಾ ಖರೀದಿಸಿದ್ದರು. ಆದರೆ ಇದು ಅಗ್ಗದ ಲೆಹೆಂಗಾ ತನಗೆ ಇಷ್ಟವಾಗಿಲ್ಲ ಎಂದು ಉತ್ತರಾಖಾಂಡದ ಹಲ್ದಾನಿಯಲ್ಲಿ ವಧು ನಿರಾಕರಿಸಿ ಮದುವೆ ಮುರಿದಿದ್ದಾಳೆ!
ಮದುವೆ ಆಮಂತ್ರಣ ಪತ್ರಿಕೆಗಳು ಎಲ್ಲೆಡೆ ಹಂಚಿಯಾಗಿತ್ತು. ಜೂನ್ನಲ್ಲಿ ಎಂಗೇಜ್ಮೆಂಟ್ ಆಗಿತ್ತು. ನವೆಂಬರ್ 5ರಂದು ಇವರಿಬ್ಬರ ಮದುವೆ ನಡೆಯಬೇಕಿತ್ತು. ಇದೀಗ ಮದುವೆ ರದ್ದಾಗಿದೆ.