
ಮದುವೆಯ ದಿನ ವರನ ಕಡೆಯವರ ಮೆರವಣಿಗೆ ಬರುತ್ತಿರುವ ವೇಳೆ ವಧು ಬಾಲ್ಕನಿಯಿಂದ ನಿಂತು ಆತನನ್ನು ಕರೆಯುವ ವಿಡಿಯೋ ವೈರಲ್ ಆಗಿದೆ.
ಉತ್ಸಾಹಭರಿತ ವಧು ತನ್ನ ವರ “ಚೀನು” ಬಂದಿದ್ದಾನೆಯೇ ಎಂದು ನೋಡಲು ಬಾಲ್ಕನಿಗೆ ಧಾವಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ವಧು ತನ್ನ ಕಡೆಯವರಿಗೆ ಹೇಳಿ ಜೀಜು ಜೀಜು ಎಂದು ಕರೆಯುವಂತೆ ಕೇಳಿಕೊಳ್ಳುತ್ತಾಳೆ. ಕೆಳಗಡೆ ವರನ ಮೆರವಣಿಗೆ ಬರುತ್ತಿರುವಾಗ ವಧು ಮತ್ತು ಆಕೆಯ ಕಡೆಯವರು ವರನನ್ನು ಕರೆಯುವುದನ್ನು ನೋಡಬಹುದು.
ಈಗ ವೈರಲ್ ಆಗಿರುವ ವೀಡಿಯೊವನ್ನು ಬ್ರೈಡಲ್ ಲೆಹೆಂಗಾ ಎಂಬ ಇನ್‌ಸ್ಟಾಗ್ರಾಮ್ ಪುಟವು “ದುಲ್ಹಾ ಕಹಾ ಹೈ ಮೇರಾ” (ನನ್ನ ವರ ಎಲ್ಲಿದ್ದಾನೆ?) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ಬಾಲ್ಕನಿಯತ್ತ ಧಾವಿಸುತ್ತಿರುವುದನ್ನು ತೋರಿಸುವ ಮೂಲಕ ವೀಡಿಯೊ ತೆರೆಯುತ್ತದೆ, ಹಿನ್ನೆಲೆಯಲ್ಲಿ ಯಾರೋ “ದುಲ್ಹಾ ಆಗಯಾ” ಎಂದು ಹೇಳುತ್ತಿದ್ದಾರೆ. ಬಾಲ್ಕನಿಗೆ ಬರುವ ಆಕೆ ಚೆನ್ನು ಎಂದು ಕರೆಯುತ್ತಾಳೆ.
ಈ ವಿಡಿಯೋ ನೋಡಿದ ಹಲವರು ಸೋ ಕ್ಯೂಟ್ ಎಂದಿದ್ದರೆ, ಸ್ವಲ್ಪ ಹೊತ್ತು ಕಳೆದರೆ ಮದುವೆ. ವಧುವಿಗೆ ಇಷ್ಟು ಅವಸರವೇಕೆ ಎಂದು ಕೆಲವರು ವಧುವಿನ ಕಾಲೆಳೆದಿದ್ದಾರೆ.
https://www.youtube.com/watch?v=TmY9QL_Na5w