ನ್ಯೂಯಾರ್ಕ್: ರಾತ್ರಿಯ ಆಕಾಶವು ಚಂದ್ರನ ಸೌಂದರ್ಯದಿಂದ ಬೆಳಗಿದಾಗ ನೋಡುಗರು ಸಾಮಾನ್ಯವಾಗಿ ಮೂಕರಾಗುತ್ತಾರೆ. ಕೆಲವೊಮ್ಮ, ವಿಶೇಷ ಸಂದರ್ಭಗಳಲ್ಲಿ ಈ ಚಂದಿರನ ಸೊಬಗನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ. ಬಂಗಾರದ ಉಂಗುರದಂತೆ ಕೆಲವೊಮ್ಮೆ ಕಂಗೊಳಿಸಿದರೆ, ಅರ್ಧಚಂದಿರನಾಗಿದ್ದಾಗಲೂ ಹಲವು ಬಾರಿ ಚಂದ್ರ ಸುಂದರವಾಗಿ ಕಾಣುತ್ತಾನೆ.
ಅಂಥದ್ದೇ ಒಂದು ಸುಂದರ ದೃಶ್ಯವನ್ನು ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಗ್ಮಾ ಶ್ರೀಧರನ್ ಎಂಬ ಛಾಯಾಗ್ರಾಹಕ, ಅಮೆರಿಕದ ವಾಷಿಂಗ್ಟನ್ನಲ್ಲಿರುವ ಸಿಯಾಟಲ್‌ನ ಗೋಪುರ ಒಂದರ ಹಿಂದುಗಡೆ ಚಂದ್ರನ ಈ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಆಕಾಶದಲ್ಲಿ ಎತ್ತರಕ್ಕೆ ಏರಿದ ಚಂದ್ರನು ನಿಧಾನವಾಗಿ ದಿಗಂತದ ಹಿಂದೆ ಮುಳುಗುವ ವಿಡಿಯೋ ಇದಾಗಿದೆ.
Sony A7R4, Sony 200-600mm ಲೆನ್ಸ್‌ನಲ್ಲಿ 600mm, f/6.3, ISO 1250ನಲ್ಲಿ 1/8 ಸೆಕೆಂಡ್‌ನಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಸಿಗ್ಮಾ ಶ್ರೀಧರನ್ ಮಾಹಿತಿ ನೀಡಿದ್ದಾರೆ. ಈ ಚಂದ್ರನ ದೃಶ್ಯ ನಿಜಕ್ಕೂ ಮೂಕ ವಿಸ್ಮಿತರನ್ನಾಗಿ ಮಾಡಿಸುತ್ತದೆ.