alex Certify ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು KSRTC ಯಿಂದ ಉಸಿರು ತಪಾಸಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು KSRTC ಯಿಂದ ಉಸಿರು ತಪಾಸಣೆ

ಬೆಂಗಳೂರು: ಕರ್ತವ್ಯದ ಸಂದರ್ಭದಲ್ಲಿ ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು ಕೆಎಸ್ಆರ್ಟಿಸಿಯಿಂದ ನಿಯಮಿತವಾಗಿ ಚಾಲನಾ ಸಿಬ್ಬಂದಿಯ ಉಸಿರು ತಪಾಸಣೆ ಮಾಡಲು ನಿರ್ಧರಿಸಲಾಗಿದೆ.

ಕೆಎಸ್ಆರ್ಟಿಸಿ ಬಸ್ ಗಳಿಂದ ಉಂಟಾಗುವ ಅಪಘಾತಗಳಿಗೆ ಚಾಲನಾ ಸಿಬ್ಬಂದಿ ಬಸ್ ಚಾಲನೆ ವೇಳೆ ಮದ್ಯಪಾನ ಮಾಡುವುದು ಕೂಡ ಕಾರಣವಾಗಿದೆ. ಈ ಬಗ್ಗೆ ಮಾರ್ಚ್ 26ರಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಅಪಘಾತ ಪ್ರಕರಣಗಳ ವಿಶ್ಲೇಷಣಾ ಸಭೆಯಲ್ಲಿ ಚರ್ಚಿಸಲಾಗಿದೆ.

ಕೆಎಸ್ಆರ್ಟಿಸಿ ವತಿಯಿಂದ ಬಸ್ ಘಟಕಗಳು ಸೇರಿದಂತೆ ಇತರೆ ಕಡೆಗಳಲ್ಲಿ ನಿಯಮಿತವಾಗಿ ಚಾಲನಾ ಸಿಬ್ಬಂದಿಯ ಉಸಿರು ತಪಾಸಣೆಗೆ ತೀರ್ಮಾನಿಸಲಾಗಿದೆ. ಚಾಲನ ಸಿಬ್ಬಂದಿ ಕರ್ತವ್ಯದ ವೇಳೆ ಮದ್ಯಪಾನ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಘಟಕಗಳು, ಸಿಬ್ಬಂದಿ ವಸತಿ ಸ್ಥಳ, ಮಾರ್ಗ ಮಧ್ಯದಲ್ಲಿ ಜಾಗೃತಗೊಳಿಸುವ ಸ್ಥಳಗಳಲ್ಲಿ ಚಾಲನಾ ಸಿಬ್ಬಂದಿಯ ಉಸಿರು ತಪಾಸಣೆ ಯಂತ್ರದ ಮೂಲಕ ತಪಾಸಣೆಗೆ ಒಳಪಡಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಕ್ರಮಕ್ಕೆ ನಿಗಮದ ಸಿಬ್ಬಂದಿ, ಭದ್ರತಾ ವಿಭಾಗದ ನಿರ್ದೇಶಕರು, ಎಲ್ಲ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ರಾತ್ರಿ ಸಂಚರಿಸುವ ವಾಹನಗಳ ಚಾಲನಾ ಸಿಬ್ಬಂದಿಯನ್ನು ನಿಗದಿತ ಸ್ಥಳಗಳಲ್ಲಿ ಮತ್ತು ಘಟಕದಿಂದ ಬಸ್ ಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಉಸಿರು ತಪಾಸಣಾ ಯಂತ್ರದ ಮೂಲಕ ತಪಾಸಣೆಗೆ ಒಳಪಡಿಸಬೇಕು. ಅವರು ಮದ್ಯಪಾನ ಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...