ಮಗುವಿಗೆ ಹಾಲುಣಿಸುವ ತಾಯಂದಿರು ಮೆಂತ್ಯೆ ಕಾಳು ಸೇವಿಸುವುದು ಬಹಳ ಮುಖ್ಯ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಬಿ6, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮ್ಯಾಗ್ನಿಷಿಯಮ್ ಹೆಚ್ಚಿದೆ.
ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸುವ ಗುಣ ಈ ಮೆಂತ್ಯೆ ಕಾಳುಗಳಲ್ಲಿ ಅಡಗಿದೆ. ಎದೆ ಹಾಲು ಹೆಚ್ಚಿಸುವುದರ ಜೊತೆಗೆ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರನ್ನೂ ಸೇವಿಸಬೇಕು. ಮೆಂತೆ ಪುಡಿ ಮಾಡಿಕೊಂಡು ಹಾಲಿನ ಜೊತೆ ಸೇವಿಸಬಹುದು ಅಥವಾ ಮೊಳಕೆ ರೂಪದಲ್ಲಿ ಸೇವಿಸಬಹುದು.
ಹೆರಿಗೆ ಆದ ನಂತರ ಬಾಣಂತಿಯರಿಗೆ ಮೆಂತ್ಯೆ ಲಾಡುಗಳನ್ನೂ ತಿನ್ನಲು ಕೊಡುತ್ತಾರೆ. ಏಕೆಂದರೆ ಇದು ಶಕ್ತಿಯನ್ನು ಹೆಚ್ಚಿಸಿ ಎದೆ ಹಾಲಿನ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಬ್ರೆಸ್ಟ್ ಕ್ಯಾನ್ಸರ್ ಕಾಯಿಲೆಗಳಿಂದ ದೂರವಿಡುತ್ತದೆ. ಪ್ರತಿಯೊಬ್ಬ ಮಹಿಳೆಯರು ತಮ್ಮ ಆಹಾರದಲ್ಲಿ ಈ ಮೆಂತ್ಯೆ ಸೊಪ್ಪನ್ನೂ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ದೇಹದ ಕೊಬ್ಬನ್ನು ಕರಗಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.