ಹಾಲುಣಿಸುವ ತಾಯಂದಿರು ಹೆಚ್ಚೆಚ್ಚು ನೀರನ್ನು ಸೇವಿಸಬೇಕು. ಒಂದು ವೇಳೆ ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಹಾಲು ಉತ್ಪಾದನೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಹಾನಿಯುಂಟಾಗುತ್ತದೆ. ಹಾಗಾಗಿ ಹಾಲುಣಿಸುವ ತಾಯಂದಿರು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಗುವಿಗೆ ಹಾಲುಣಿಸುವ ತಾಯಂದಿರು ದಿನಕ್ಕೆ 11.5 ಕಪ್ ನೀರು ಕುಡಿಯಬೇಕು ಎಂದು ಸಂಶೋಧಕರು ಹೇಳುತ್ತಾರೆ. ಸ್ತನ್ಯಪಾನಕ್ಕೆ ದೇಹದಲ್ಲಿ ಜಲಸಂಚಲನದ ಅಗತ್ಯವಿರುತ್ತದೆ. ನೀವು ಸ್ತನ್ಯಪಾನ ಮಾಡಿದಾಗಲೆಲ್ಲಾ ಅದರ ಮೊದಲು ಮತ್ತು ನಂತರ ಒಂದು ಲೋಟ ನೀರು ಕುಡಿಯಿರಿ.
ಹಾಗೇ ತಾಯಿಯ ದೇಹದಲ್ಲಿ ನೀರಿನ ಕೊರತೆಯನ್ನು ಈ ಮೂಲಕ ತಿಳಿದುಕೊಳ್ಳಕಬಹುದು. ನೀರು ಸರಿಯಾಗಿ ಸೇವಿಸಿದ ತಾಯಂದಿರ ಮೂತ್ರದ ಬಣ್ಣ ತಿಳಿ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಅದೇರೀತಿ ದೇಹದಲ್ಲಿ ನೀರಿನ ಕೊರತೆಯಾದಾಗ ಮೂತ್ರದ ಬಣ್ಣ ಗಾಢ ಹಳದಿ ಬಣ್ಣಕ್ಕೆ ಬದಲಾಗುತ್ತದೆ.