ಮಗು ಹುಟ್ಟಿದ 6 ತಿಂಗಳವರೆಗೂ ಅಮ್ಮನ ಹಾಲು ಬಿಟ್ಟರೆ ಬೇರೆ ಆಹಾರ ಕೊಡಬಾರದು ಎಂಬುದು ವೈದ್ಯಲೋಕ ಹೇಳುವ ಮಾತು. ಇದು ನವಜಾತ ಶಿಶುವಿಗೆ ಸಂಪೂರ್ಣ ಆಹಾರ.
ಶಿಶುವಿಗೆ ಹೊರತುಪಡಿಸಿ ತಾಯಿಯ ಮೊಲೆಹಾಲು ಈ ಕೆಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.
ಮೂಗಿನ ಹೊಳ್ಳೆಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಾಲ್ಕಾರು ಹನಿ ಮೊಲೆ ಹಾಲನ್ನು ಹೊಳ್ಳೆಗಳಲ್ಲಿ ಹಾಕಿದರೆ ತಕ್ಷಣ ರಕ್ತಸ್ರಾವ ನಿಲ್ಲುತ್ತದೆ.
ಉಷ್ಣದಿಂದ ಕಣ್ಣು ಕೆಂಪಾಗಿದ್ದರೆ, ಕಣ್ಣುಗಳು ಉರಿಯುತ್ತಿದ್ದರೆ ಒಂದೆರಡು ಹನಿ ಎದೆ ಹಾಲನ್ನು ಕಣ್ಣಿಗೆ ಹಾಕುವುದರಿಂದ ಕಣ್ಣುಗಳು ಬಹಳ ಬೇಗ ತಂಪಾಗುತ್ತದೆ.
ಶೀತದಿಂದ ಮಗುವಿಗೆ ಮೂಗು ಕಟ್ಟಿ ಉಸಿರಾಡಲು ತೊದರೆಯಾಗುತ್ತಿದ್ದರೆ ಎರಡು ಹನಿ ಹಾಲು ಹಾಕಿದರೆ ಉಸಿರಾಟ ಸರಾಗವಾಗುತ್ತೆ.