ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗವಾಗಿದೆ. 2009 ರಿಂದ ಪ್ರತಿ ವರ್ಷ ಸರಾಸರಿ 0.3% ಪ್ರಕರಣಗಳು ಹೆಚ್ಚಾಗುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರ, ಮಹಿಳೆಯರಲ್ಲಿ ಕ್ಯಾನ್ಸರ್ ಸಾವಿಗೆ ಇದು ಈಗ ಎರಡನೇ ಪ್ರಮುಖ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಆತಂಕಕಾರಿ ಏರಿಕೆಯಿಂದಾಗಿ, ಆರೋಗ್ಯ ಸಂಸ್ಥೆಗಳು ಮತ್ತು ಮಹಿಳಾ ಗುಂಪುಗಳು ಸ್ವಯಂ-ಪರೀಕ್ಷೆ ಮತ್ತು ಚಿಕಿತ್ಸೆಯ ಕುರಿತು ಹಲವಾರು ಅಭಿಯಾನಗಳನ್ನು ನಡೆಸಿವೆ. ಕ್ಯಾನ್ಸರ್ ಅನ್ನು ಸೋಲಿಸಿದವರು, ಭರವಸೆಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಹಾಗೂ ರೋಗವನ್ನು ಜಯಿಸುವುದು ಮತ್ತು ಎದುರಿಸುವುದು ಹೇಗೆ ಎಂಬುದರ ಕುರಿತು ಇತರರಿಗೆ ಮಾಹಿತಿ ನೀಡುತ್ತಾರೆ.
ಸಾಲ ಬಾಧೆ ನಿವಾರಣೆಯಾಗಿ ಆರ್ಥಿಕ ಚೇತರಿಕೆ ಹಾಗೂ ಧನಲಾಭಕ್ಕಾಗಿ ಅನುಸರಿಸಿ ಈ ಮಾರ್ಗ
ಇದೀಗ ಸ್ತನ ಕ್ಯಾನ್ಸರ್ ಅನ್ನು ಜಯಿಸಿ ಬಂದಿರುವ, 36 ವರ್ಷದ ಜೆಸ್ಸಿಕಾ ಬಲದಾದ್ ಎಂಬಾಕೆ ತಮ್ಮ ದೇಹದ ಮೇಲೆ ಸ್ವಯಂ ಪರೀಕ್ಷೆಗಳನ್ನು ನಡೆಸಲು ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಜೆಸ್ಸಿಕಾ, ಕ್ಯಾನ್ಸರ್ ಭೀತಿಯಿಂದ ನಿಯಮಿತವಾಗಿ ತನ್ನ ಸ್ತನಗಳನ್ನು ಪರೀಕ್ಷಿಸುತ್ತಿದ್ದರು. ಈ ವೇಳೆ ಆಕೆಗೆ ಗಡ್ಡೆಯಿರುವುದು ಗೋಚರಿಸಿದೆ. ಆ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಯಿತು. ಆ ಬಳಿಕವೂ ಆಕೆ ತನ್ನ ಸ್ತನಗಳನ್ನು ನಿಯಮಿತವಾಗಿ ಪರೀಕ್ಷಿಸುವ ಅಭ್ಯಾಸವನ್ನು ಹೊಂದಿದ್ದರು. ಈ ಅಭ್ಯಾಸವೇ ಆಕೆಗೆ ಸಹಾಯ ಮಾಡಿದೆ. ಯಾಕೆಂದರೆ ಹಲವಾರು ವರ್ಷಗಳ ಬಳಿಕ ಆಕೆಗೆ ಮತ್ತೊಂದು ಗಡ್ಡೆ ಇರುವುದು ಗೊತ್ತಾಗಿದೆ.
ವೈದ್ಯರ ಬಳಿ ತಪಾಸಣೆಗೆ ತೆರಳಿದ ಜೆಸ್ಸಿಕಾ, ಅಲ್ಟ್ರಾಸೌಂಡ್ ಪರೀಕ್ಷೆಗಳ ನಂತರ ಆಕೆಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ನಂತರ 16 ಸುತ್ತುಗಳ ಕೀಮೋಥೆರಪಿ, ಡಬಲ್ ಮಾಸ್ಟೆಕ್ಟಮಿ ಮತ್ತು 25 ಗಂಟೆಗಳ ವಿಕಿರಣ ಚಿಕಿತ್ಸೆ ನೀಡಲಾಗಿದೆ.
247 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಲೋಕಸೇವಾ ಆಯೋಗ
ಈ ವರ್ಷದ ಆರಂಭದಲ್ಲಿ ಜೆಸ್ಸಿಕಾ, ಫ್ಲಾಪ್ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದರೆ ಶಸ್ತ್ರಚಿಕಿತ್ಸಕರು ಜೆಸ್ಸಿಕಾ ಹೊಟ್ಟೆಯಿಂದ ಕೊಬ್ಬಿನ ಅಂಗಾಂಶಗಳು ಮತ್ತು ರಕ್ತನಾಳಗಳನ್ನು ಹೊರತೆಗೆದಿದ್ದಾರೆ. ಇದೀಗ ಈಕೆ ಗುಣಮುಖಳಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಹಾಗೂ ಮಹಿಳೆಯರಿಗೆ ಸಹಾಯವಾಗಲೆಂದೇ ‘ಫೀಲ್ ಫಾರ್ ಯುವರ್ ಲೈಫ್’ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.