
ಬೆಳಗಾವಿ : ಬೆಳಗಾವಿಯಲ್ಲಿ ತಡರಾತ್ರಿ ನಡುರಸ್ತೆಯಲ್ಲೇ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿಯ ಶಿವಬಸವನಗರದಲ್ಲಿ ಯುವಕನನ್ನು ಮೂವರು ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಹತ್ಯೆ ಮಾಡಿದ್ದಾರೆ. ಮೃತ ಯುವಕನನ್ನು ರಾಮನಗರ ನಿವಾಸ ನಾಗರಾಜ್ ಗಾಡಿವಡ್ಡರ್ ಎಂದು ಗುರುತಿಸಲಾಗಿದ್ದು, ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಲ್ಲುಗಳಿಂದ ಜಜ್ಜಿ ನಾಗರಾಜ್ ಕೊಲೆ ಮಾಡಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದ, ಪರಿಶೀಲನೆ ನಡೆಸಿದ್ದಾರೆ.