‘ಮೊಮೋಸ್ ತಿಂದು ಓರ್ವ ಮಹಿಳೆ ಮೃತಪಟ್ಟು, 20 ಮಂದಿ ಅಸ್ವಸ್ಥರಾದ ಘಟನೆ ಹೈದರಾಬಾದ್’ನಲ್ಲಿ ನಡೆದಿದೆ.
ಬಂಜಾರ ಹಿಲ್ಸ್ ನ ನಂದಿನಗರದಲ್ಲಿ ಈ ಘಟನೆ ನಡೆದಿದ್ದು, ಮೊಮೋಸ್ ತಿಂದು ಓರ್ವ ಮಹಿಳೆ ಮೃತಪಟ್ಟು, 20 ಮಂದಿ ಅಸ್ವಸ್ಥರಾಗಿದ್ದಾರೆ.
ಮೊಮೋಸ್ ಉತ್ತರ ಭಾರತದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ವೆಜ್ & ನಾನ್ ವೆಜ್ 2 ಕೂಡ ಬರುತ್ತದೆ. ಮೊಮೊಸ್ ಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟಿನಲ್ಲಿ ಅಜೋಡಿಕಾರ್ಬೊನಮೈಡ್ ಮತ್ತು ಬೆಂಜಾಯ್ಲ್ ಪೆರಾಕ್ಸೈಡ್ ಸಮೃದ್ಧವಾಗಿದೆ. ಮೊಮೊಸ್ ಅನ್ನು ಹೆಚ್ಚು ಕಾಲ ಮೃದುವಾಗಿಡಲು ಅಲೋಕ್ಸಾನ್ ಎಂಬ ದ್ರವವನ್ನು ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.