ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಕೌನ್ಸಿಲ್ ಕಟ್ಟಡದಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ತಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.ವಿಜಯನಗರದ ಉಮಾ ಮಹೇಶ್ವರಿ ಎಂಬುವವರು ತಮಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಗೋವಿಂದರಾಜ ನಗರದ ಎಂಸಿಉ ಲೇಔಟ್ ನಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ವಿಜಯನಗರದ ನಿವಾಸಿಯಾದ ಉಮಾ ಮಹೇಶ್ವರಿ 16 ನೇ ಆಗಸ್ಟ್ 2024 ರಂದು ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಕೊಟ್ಟಂತಹ ಔಷಧಿಯಿಂದ ನನಗೆ ಸಮಸ್ಯೆಯಾಗಿದೆ, ನನಗೆ ಪರಿಹಾರ ಕೊಡಬೇಕು ಎಂದು ಕೌನ್ಸಿಲ್ ಸಭಾಂಗಣದ ಮೇಲೆ ಹತ್ತಿ ಕೆಳಗೆ ಬೀಳಲು ಯತ್ನಿಸಿದ್ದಾರೆ.