ಕುಸ್ತಿಪಟು ವಿನೇಶ್ ಫೋಗಟ್ ಅವರು ನಿವೃತ್ತಿಯಾಗುವುದಾಗಿ ಘೋಷಿಸಿದ ನಂತರವೂ ಪ್ರಮುಖ ಬೆಳವಣಿಗೆಗಳು ನಡೆದಿವೆ.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್‌ಗೆ ಮುನ್ನ 100 ಗ್ರಾಂ ಅಧಿಕ ತೂಕ ಕಂಡುಬಂದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ನಿಂದ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿದೆ. ವಿನೇಶ್ ಗೆ ಬೆಳ್ಳಿ ಪದಕ ಖಚಿತವಾಗಿದ್ದರೂ, ಅನರ್ಹತೆಯು ಪದಕದ ಆಸೆಗೆ ತಣ್ಣೀರೆರಚಿದೆ. ಈ ನಿರ್ಧಾರದ ವಿರುದ್ಧ ಭಾರತೀಯ ಗ್ರಾಪ್ಲರ್ ಸಿಎಎಸ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಿನೇಶ್ ಫೋಗಟ್ ಅವರ ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಸ್ವೀಕರಿಸಿದೆ. ಭಾರತೀಯ ಕುಸ್ತಿಪಟು ಇನ್ನೂ ಬೆಳ್ಳಿ ಪದಕ ಗೆಲ್ಲಬಹುದು ಎನ್ನಲಾಗಿದೆ.
ಕುಸ್ತಿಪಟು ವಿನೇಶ್ ಫೋಗಟ್ ಪರವಾಗಿ CAS ನಿಯಮಗಳು
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಈವೆಂಟ್ ನಲ್ಲಿ ಚಿನ್ನದ ಪದಕದ ಪಂದ್ಯಕ್ಕೂ ಮುನ್ನ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಅನರ್ಹತೆಯ ನಂತರ, CAS ನ್ಯಾಯಾಲಯವನ್ನು ಸಂಪರ್ಕಿಸಿ ಮೇಲ್ಮನವಿ ಸಲ್ಲಿಸಿದರು, ಅಲ್ಲಿ ಅವರು ಜಂಟಿಯಾಗಿ ಬೆಳ್ಳಿ ಪದಕ ನೀಡುವಂತೆ ಕೋರಿದ್ದಾರೆ. ಫೋಗಟ್ ಸೆಮಿಸ್‌ನಲ್ಲಿ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ ಫೈನಲ್‌ಗೆ ಮುನ್ನಡೆದರು. ಅಲ್ಲಿ ಯುಎಸ್‌ಎಯ ಸಾರಾ ಹಿಲ್ಡೆಬ್ರಾಂಡ್‌ರನ್ನು ಎದುರಿಸಬೇಕಿತ್ತು.
ಒಲಿಂಪಿಕ್ಸ್ ನಲ್ಲಿ 100 ಗ್ರಾಂ ಅಧಿಕ ತೂಕದ ಕಾರಣ ಫೈನಲ್‌ನಿಂದ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಕ್ರೀಡೆಯಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಮ್ಮಾ ಕುಸ್ತಿ ಗೆದ್ದಿದೆ ನಾನು ಸೋತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಎಲ್ಲವೂ ಮುರಿದುಹೋಗಿದೆ. ನನಗೆ ಈಗ ಯಾವುದೇ ಶಕ್ತಿ ಇಲ್ಲ. ಕುಸ್ಇತಗೆ ವಿದಾಯ ಹೇಳುತ್ತೇನೆ ಎಂದು ಅವರು ಭಾವನಾತ್ಮಕ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಂತಿಮವಾಗಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್‌ನಲ್ಲಿ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿದ ಸಾರಾ ಹಿಲ್ಡೆಬ್ರಾಂಡ್ ಚಿನ್ನದ ಪದಕ ಪಡೆದರು. ವಿನೇಶ್ ಬದಲಿಗೆ ಬಂದ ಕ್ಯೂಬಾದ ಕುಸ್ತಿಪಟು ಬೆಳ್ಳಿ ಪದಕ ಪಡೆದರು.