ಯಮೆನ್ : ಇತ್ತೀಚಿನ ಯುಎಸ್ ಮತ್ತು ಯುಕೆ ದಾಳಿಯಲ್ಲಿ ಒಟ್ಟು 17 ಹೌತಿ ಹೋರಾಟಗಾರರು ಸಾವನ್ನಪ್ಪಿದ್ದಾರೆ. ಎಲ್ಲರನ್ನೂ ರಾಜಧಾನಿ ಸನಾದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಯೆಮೆನ್ ಬಂಡುಕೋರ ಗುಂಪು ದೃಢಪಡಿಸಿದೆ.
ಯುಎಸ್-ಬ್ರಿಟಿಷ್ ಆಕ್ರಮಣಕಾರಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ಹೋರಾಟಗಾರರ ದೇಹಗಳಿಗೆ ಇಂದು ಸನಾದಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು” ಎಂದು ಹೇಳಿದೆ. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗು ಮತ್ತು ಯುಎಸ್ ಯುದ್ಧನೌಕೆಗಳ ಮೇಲೆ ಹೌತಿ ಹೋರಾಟಗಾರರು ದಾಳಿ ನಡೆಸುತ್ತಿರುವುದರಿಂದ ತನ್ನ ಮಿಲಿಟರಿ ಕ್ಷಿಪಣಿ ಲಾಂಚರ್ಗಳ ವಿರುದ್ಧ ಅನೇಕ ದಾಳಿಗಳನ್ನು ನಡೆಸಿದೆ ಎಂದು ಯುಎಸ್ ಗುರುವಾರ ದೃಢಪಡಿಸಿದೆ.