ವಾಷಿಂಗ್ಟನ್ : ಯೆಮೆನ್ ನ ಹೌತಿ ಬಂಡುಕೋರರನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆ ಮತ್ತೆ ವೈಮಾನಿಕ ದಾಳಿ ನಡೆಸಿದೆ.
ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸುವ ನಿರೀಕ್ಷೆಯಿದ್ದ ನಾಲ್ಕು ಸ್ಫೋಟಕ ತುಂಬಿದ ಡ್ರೋನ್ ದೋಣಿಗಳು ಮತ್ತು ಏಳು ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ಲಾಂಚರ್ಗಳನ್ನು ಯುಎಸ್ ಪಡೆಗಳು ಗುರುವಾರ ನಾಶಪಡಿಸಿವೆ ಎಂದು ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.