ಬೆಂಗಳೂರು : ರಾಜ್ಯದಲ್ಲಿ ‘ಮುಸುಕುಧಾರಿ ಗ್ಯಾಂಗ್’ ಅಟ್ಟಹಾಸ ಮುಂದುವರೆದಿದ್ದು, ಚಿಕ್ಕಮಗಳೂರಲ್ಲಿ ಮನೆಗೆ ನುಗ್ಗಿ ಹಣ, ಚಿನ್ನ ದೋಚಿ ಪರಾರಿಯಾದ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಹೀರೇಮಗಳೂರಿನಲ್ಲಿ ಈ ಘಟನೆ ನಡೆದಿದೆ. ಯೆಸ್, ಚಿಕ್ಕಮಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ ಒಂದು ಆ್ಯಕ್ಟೀವ್ ಆಗಿದ್ದು, ಹೀರೇಮಗಳೂರಿನಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ರಾಮಮ್ಮ ಎಂಬುವವರ ಮನೆಗೆ ಕನ್ನ ಹಾಕಿದ್ದಾರೆ.
ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ಒಡೆದು ಹಾಕಿ, ಮನೆಯಲ್ಲಿದ್ದ ಸಿಸಿಟಿವಿ ಧ್ವಂಸ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.