
ಕಲಬುರಗಿ : ಕಲಬುರಗಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮಳೆ ನೀರಿನಿಂದ ತುಂಬಿದ್ದ ತಗ್ಗುಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರು ಘಟನೆ ನಡೆದಿದೆ.
ಕಲಬುರಗಿ ನಗರದ ದುಬೈ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಓವರ್ ಹುಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತೆಗೆದಿದ್ದ ತಗ್ಗುಗುಂಡಿ ಮಳೆನೀರಿನಿಂದ ತುಂಬಿತ್ತು. ಈ ವೇಳೆ ಆಟವಾಡುತ್ತಿದ್ದ ಇಬ್ಬರು ಬಾಲಕರು ಆಯಾ ತಪ್ಪಿ ತಗ್ಗು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ತಗ್ಗು ಗುಂಡಿಗೆ ಬಿದ್ದು ಅಭಿ (11) ಹಾಗೂ ಅಜಯ್ (12) ಮೃತ ಬಾಲಕರು ಸಾವನ್ನಪ್ಪಿದ್ದಾರೆ. ಮಳೆನೀರನಿಂದಾಗಿ ತಗ್ಗು ಗುಂಡಿ ಸಂಪೂರ್ಣವಾಗಿ ಭರ್ತಿಯಾಗಿತ್ತು.