ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆಯನ್ನು ಕದ್ದ ಇಬ್ಬರನ್ನು ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ಬಂಧಿಸಿದೆ.
ಬಂಧಿತರಲ್ಲಿ ಒಬ್ಬರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಟ್ರಂಕ್ನಿಂದ ನೀಟ್-ಯುಜಿ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದರು ಎಂದು ವರದಿ ತಿಳಿಸಿದೆ. ಬಂಧಿತರನ್ನು ಪಾಟ್ನಾದ ಪಂಕಜ್ ಕುಮಾರ್ ಮತ್ತು ಹಜಾರಿಬಾಗ್ನ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರಶ್ನೆ ಪತ್ರಿಕೆ ಕಳ್ಳತನ ಮತ್ತು ಪ್ರಸಾರದಲ್ಲಿ ಭಾಗಿಯಾಗಿದ್ದರು