ಸಂಧ್ಯಾ ಥಿಯೇಟರ್’ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.
ಡಿಸೆಂಬರ್ 4, 2024 ರಂದು ಹೈದರಾಬಾದ್ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಪುಷ್ಪ-2 ಚಿತ್ರದ ಪ್ರೀಮಿಯರ್ ಶೋಲ್ಲಿ ರೇವತಿ ಎಂಬ 39 ವರ್ಷದ ಮಹಿಳೆ ಸಾವನ್ನಪ್ಪಿದರು ಮತ್ತು ಅವರ ಎಂಟು ವರ್ಷದ ಮಗ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು.
ಇಂದು ಬೆಳಿಗ್ಗೆ 10 ಗಂಟೆಗೆ ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯಲ್ಲಿ ಶ್ರೀ ತೇಜ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲು ಅರ್ಜುನ್ ಮಗುವಿನ ಚೇತರಿಕೆಯನ್ನು ಪರಿಶೀಲಿಸಿ ಮತ್ತು ತನ್ನ ಬೆಂಬಲವನ್ನು ನೀಡಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ರನ್ನು ಡಿ.13 ರಂದು ಬಂಧಿಸಿ ನಂತರ ಜಾಮೀನನ ಮೇಲೆ ರಿಲೀಸ್ ಮಾಡಲಾಗಿತ್ತು.