ವಿಜಯಪುರ : ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿಯಲ್ಲಿ ನಡೆದಿದೆ.
ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ರೋಹಿತ್ ಅನಿಲ್ ಚವಾಣ್ (8) ವಿಜಯ್ ಪಿಂಟು ಚವ್ಹಾಣ್ (16) ಎಂದು ಗುರುತಿಸಲಾಗಿದೆ.
ವಿದ್ಯುತ್ ವೈರ್ ತುಂಡಾಗಿ ಕೆರೆಗೆ ಬಿದ್ದಿತ್ತು, ಇದನ್ನು ಗಮನಿಸದೇ ಬಾಲಕರು ಕೆರೆಗೆ ಇಳಿದಿದ್ದಾರೆ. ಮೃತ ಬಾಲಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.