ಬೆಂಗಳೂರು : ರಾಜ್ಯದಲ್ಲಿ HMPV ವೈರಸ್ ಶೇ.1 ರಷ್ಟು ತೀವ್ರತೆ ಇದೆ , ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.
HMPV ಇದು ಹೊಸ ವೈರಸ್ ಅಲ್ಲ, ಇದು ಹಿಂದಿನಿಂದಲೂ ಇದೆ. ಚೀನಾ ವೈರಸ್ ಗೂ ಇದಕ್ಕೂ ಸಂಬಂಧವಿಲ್ಲ. ಪರೀಕ್ಷೆ ಮಾಡಿಸಿದ್ರೆ ಎಲ್ಲಾ ವೃದ್ದರು ಮಕ್ಕಳಲ್ಲೂ ಪಾಸಿಟಿವ್ ಬರಬಹುದು , ಆದರೆ ಎಚ್ಚರ ವಹಿಸುವುದು ಅಗತ್ಯ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಮತ್ತೊಂದು ‘HMPV’ ವೈರಸ್ ಕೇಸ್ ಪತ್ತೆಯಾಗಿದ್ದು, 3 ತಿಂಗಳ ಮಗುವಿಗೆ ಸೋಂಕು ಧೃಡವಾಗಿದೆ. 3 ತಿಂಗಳ ಮಗುವಿನಲ್ಲಿ ಎಚ್ ಎಮ್ ಪಿ ವಿ ವೈರಸ್ ಕಾಣಿಸಿಕೊಂಡಿದ್ದು, ಮಗು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2 ಕ್ಕೇರಿಕೆಯಾಗಿದೆ.