ತಾಂಜೇನಿಯಾ : ತಾಂಜೇನಿಯಾದ ಸಿಮಿಯು ಪ್ರದೇಶದ ಬರಿಯಾಡಿ ಜಿಲ್ಲೆಯ ಗಣಿಯೊಂದರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 22 ಜನರು ಸಾವನ್ನಪ್ಪಿದ್ದಾರೆ ವರದಿಗಳು ತಿಳಿಸಿದೆ.
ದುರಂತ ಸಂಭವಿಸಿದಾಗ ಗಣಿಯೊಳಗೆ ಸಿಲುಕಿದ್ದ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಂಜೇನಿಯಾ ಮೂಲದ ಪತ್ರಿಕೆ ವರದಿ ಮಾಡಿದೆ.
“ಎರಡು ದಿನಗಳ ನಿರಂತರ ರಕ್ಷಣಾ ಕಾರ್ಯದ ನಂತರ ವಿವಿಧ ತಜ್ಞರನ್ನು ಒಳಗೊಂಡ ತಂಡವು ಭೂಕುಸಿತದಿಂದ ಹೂತುಹೋದ ಎಲ್ಲರ ಶವಗಳನ್ನು ಯಶಸ್ವಿಯಾಗಿ ಹೊರತೆಗೆದಿದೆ. ಗಣಿಯೊಳಗೆ ಯಾವುದೇ ಶವಗಳು ಉಳಿದಿಲ್ಲ ಎಂದು ಹೇಳಿದೆ.