ತೆಲಂಗಾಣದಲ್ಲಿ ಸುರಂಗ ಕುಸಿತ ಅವಘಡ ಸಂಭವಿಸಿದ್ದು, ಎಲ್ಲಾ 8 ಕಾರ್ಮಿಕರು ಸಾವನ್ನಪ್ಪಿರುವುದು ಧೃಡವಾಗಿದೆ.
ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಸುರಂಗದಲ್ಲಿ ಸಿಲುಕಿದ್ದ ಎಲ್ಲಾ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಕ್ಷಣಾ ಕಾರ್ಯಾಚರಣೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಎನ್ಡಿಆರ್ಎಫ್, ಸೇನೆಯ ಕಾರ್ಯಪಡೆ, ನೌಕಾಪಡೆಯ ಮಾರ್ಕೋಸ್, ಎಸ್ಡಿಆರ್ಎಫ್ ಮತ್ತು ತಜ್ಞ ಇಲಿ ಗಣಿಗಾರರು ಸೇರಿದಂತೆ ರಕ್ಷಣಾ ತಂಡಗಳು ಇಂದು ಶವಗಳನ್ನು ಹೊರತೆಗೆಯುವ ಸಾಧ್ಯತೆಯಿದೆ.
ರಕ್ಷಣಾ ತಂಡಗಳು 13.8 ಕಿ.ಮೀ ಸ್ಥಳದಲ್ಲಿ ಸುಮಾರು 20 ಅಡಿ ಮಣ್ಣಿನ ಕೆಸರು ಮತ್ತು 13.4 ಕಿ.ಮೀ ಸ್ಥಳದಲ್ಲಿ ಸುಮಾರು 6 ಅಡಿ ಮಣ್ಣಿನ ಕೆಸರನ್ನು ಪತ್ತೆ ಮಾಡಿವೆ. ಘಟನಾ ಸ್ಥಳದಿಂದ ಕಾರ್ಮಿಕರು ಸುರಂಗಕ್ಕೆ ಮತ್ತಷ್ಟು ಕೊಚ್ಚಿಹೋಗಿರುವ ಸಾಧ್ಯತೆಯಿದೆ ಎಂದು ರಕ್ಷಣಾ ತಂಡಗಳು ಮೌಲ್ಯಮಾಪನ ಮಾಡಿವೆ.