ಚಿಕ್ಕಮಗಳೂರು : ಅನುಮಾನಾಸ್ಪದವಾಗಿ ಯುವಕ, ಯುವತಿಯ ಶವ ಪತ್ತೆಯಾಗಿದೆ.ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಕಾರಿನಲ್ಲಿ ಯುವತಿ ಪೂರ್ಣಿಮ ಶವ ಪತ್ತೆಯಾದರೆ, ಹತ್ತಿರದ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಬಹಳ ಸಮಯದಿಂದ ನಿಲ್ಲಿಸಿದ್ದ ಕಾರನ್ನು ನೋಡಿ ಅನುಮಾನಗೊಂಡ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ಕಾರಿನಲ್ಲಿ ಯುವತಿಯ ಶವ ಇರೋದು ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು,ಮೃತರನ್ನು ಚಿಕ್ಕಮಗಳೂರಿನ ಪೂರ್ಣಿಮ, ಭದ್ರಾವತಿಯ ಮಧು ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.