ಮ್ಯಾನ್ಮಾರ್ನಲ್ಲಿ ಸತತ ಎರಡು ಭೂಕಂಪಗಳು ಸಂಭವಿಸಿವೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಶುಕ್ರವಾರ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಮಧ್ಯ ಮ್ಯಾನ್ಮಾರ್ನಲ್ಲಿದ್ದು, ಮೊನಿವಾ ನಗರದ ಪೂರ್ವಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ ಎಂದು ವರದಿಯಾಗಿದೆ.
ರಾಜಧಾನಿಯಲ್ಲಿ ಮಸೀದಿ ಕುಸಿದು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ಕಡೆ ಸಾವಿರಾರು ಮಂದಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12:50 ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮ್ಯಾನ್ಮಾರ್ನ ಮಾಂಡಲೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಿಂದಾಗಿ ಬೆಂಕಿ ಮತ್ತು ಭಾರಿ ಹಾನಿ ವರದಿಯಾಗಿದೆ, ಇಂದು ಸಂಭವಿಸಿದ ಭಾರಿ ಭೂಕಂಪದ ನಂತರ ದೇಶವು ಬಳಲುತ್ತಿರುವುದರಿಂದ ಸಾವುನೋವುಗಳ ಭಯವನ್ನು ಹುಟ್ಟುಹಾಕಿದೆ.
JUST IN: Fire and heavy damage at Mandalay University in Myanmar, reports of casualties pic.twitter.com/zgcogKCJvt
— BNO News (@BNONews) March 28, 2025