
ಕಲಬುರಗಿ : ಕಲಬುರಗಿಯಲ್ಲಿ ತಡರಾತ್ರಿ ಕಿಡಿಗೇಡಿಗಳು ಬಸವ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಕಲಬುರಗಿ ತಾಲೂಕಿನ ಬಬಲಾದ ಗ್ರಾಮದ ಬಳಿ ತಡರಾತ್ರಿ ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಇದರಿಂದ ರೈಲಿನ AC A1 ಬೋಗಿಯ ಗಾಜು ಪುಡಿ-ಪುಡಿಯಾಗಿದ್ದು, ಕಲ್ಲು ತೂರಿದ ಪರಿಣಾಮ ರೈಲಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಿಡಿಗೇಡಿಗಳು ರೈಲಿನ ಇಂಜಿನ್ ಮೇಲೆ ಸಹ ಕಲ್ಲು ಎಸೆದಿದ್ದು, ಗಾಜು ಪುಡಿ ಪುಡಿಯಾಗಿದೆ. ಘಟನೆ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.