ಬೆಂಗಳೂರು : ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವನ್ನು ಮತ್ತೆ ಬುಧವಾರದವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
10 ದಿನಗಳ ಅಧಿವೇಶನ ಶುಕ್ರವಾರವೇ ಮುಕ್ತಾಯವಾಗಬೇಕಿತ್ತು, ಆದರೆ ತೀವ್ರ ಜ್ವರ ಮತ್ತು ಗಂಟಲು ನೋವಿನಿಂದ ಸಿಎಂ ಸಿದ್ದರಾಮಯ್ಯ ಬಳಲುತ್ತಿರುವ ಹಿನ್ನೆಲೆಯಲ್ಲಿ ವ್ಯವಹಾರ ಸಲಹಾ ಸಮಿತಿಯು ನಡೆಯುತ್ತಿರುವ ಅಧಿವೇಶನವನ್ನು ಸೋಮವಾರದವರೆಗೆ ವಿಸ್ತರಿಸಲಾಗಿತ್ತು. ಆದರೆ ಇದೀಗ ಮತ್ತೆ ಬುಧವಾರದವರೆಗೆ ವಿಸ್ತರಿಸಲಾಗಿದೆ.