ರಾಯಚೂರು : ತೀವ್ರ ಹೃದಯಾಘಾತದಿಂದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ಶ್ರೀಮಂತ ವಜ್ಜಲ್ (31) ವಿಧಿವಶರಾಗಿದ್ದಾರೆ.
ತೀವ್ರ ಹೃದಯಾಘಾತದ ಬಳಿಕ ಶ್ರೀಮಂತ ವಜ್ಜಲ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಶ್ರೀಮಂತ ವಜ್ಜಲ್ ಅವರು ಮೃತಪಟ್ಟಿದ್ದಾರೆ.
ಸದ್ಯ ಬೆಂಗಳೂರಿನಿಂದ ಲಿಂಗಸುಗೂರಿಗೆ ಶ್ರೀಮಂತ ವಜ್ಜಲ್ ಅವರ ಮೃತದೇಹವನ್ನು ರವಾನೆ ಮಾಡಲಾಗುತ್ತಿದೆ. ಇಂದು ಲಿಂಗಸುಗೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.