ನವದೆಹಲಿ: ಸರ್ಕಾರಿ ಸಭೆಯ ನಂತರ ನಡೆದ ಗುಂಡಿನ ದಾಳಿಯಲ್ಲಿ ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ TASR ಬುಧವಾರ ವರದಿ ಮಾಡಿದೆ.
ಸಂಸತ್ತಿನ ಉಪಾಧ್ಯಕ್ಷ ಲುಬೋಸ್ ಬ್ಲಾಹಾ ಅವರು ಗುಂಡಿನ ದಾಳಿಯಲ್ಲಿ ಫಿಕೊ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಅವರು ಗುಂಡಿನ ಶಬ್ಧ ಕೇಳಿದ್ದು, ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವುದನ್ನು ನಾನು ನೋಡಿದೆ ಎಂದು ಹೇಳಿದ್ದಾರೆ. ಭದ್ರತಾ ಅಧಿಕಾರಿಗಳು ಯಾರನ್ನಾದರೂ ಕಾರಿನೊಳಗೆ ತಳ್ಳಿ ಓಡಿಸುವುದನ್ನು ತಾನು ನೋಡಿದ್ದೇನೆ ಎಂದು ರಾಯಿಟರ್ಸ್ ಗೆ ಪ್ರತ್ಯಕ್ಷದರ್ಶಿ ಹೇಳಿದರು. ಪ್ರತಿಕ್ರಿಯೆಗಾಗಿ ಸರ್ಕಾರಿ ಕಚೇರಿಯನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಹೌಸ್ ಆಫ್ ಕಲ್ಚರ್ ಹೊರಗೆ ಈ ಘಟನೆ ನಡೆದಿದೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಫಿಕೊ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸರ್ಕಾರದ ಸಭೆಯ ನಂತರ ನಾಲ್ಕು ಗುಂಡುಗಳನ್ನು ಹಾರಿಸಲಾಯಿತು, ಒಂದು ಪ್ರಧಾನ ಮಂತ್ರಿಯ ಹೊಟ್ಟೆಗೆ ಹೊಡೆದಿದೆ ಎಂದು ಬ್ರಾಡ್ಕಾಸ್ಟರ್ ವರದಿ ಮಾಡಿದೆ. ಸ್ಲೋವಾಕಿಯಾದ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಅವರು “ಕ್ರೂರ” ದಾಳಿಯನ್ನು ಖಂಡಿಸಿದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.