alex Certify BREAKING : ಉಡುಪಿಯಲ್ಲಿ ಶಾಕಿಂಗ್ ಘಟನೆ : ಬಾಯ್’ಫ್ರೆಂಡ್ ಜೊತೆ ಸೇರಿ ಪತಿಗೆ ವಿಷವುಣಿಸಿ ಹತ್ಯೆಗೈದ ಪಾಪಿ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಉಡುಪಿಯಲ್ಲಿ ಶಾಕಿಂಗ್ ಘಟನೆ : ಬಾಯ್’ಫ್ರೆಂಡ್ ಜೊತೆ ಸೇರಿ ಪತಿಗೆ ವಿಷವುಣಿಸಿ ಹತ್ಯೆಗೈದ ಪಾಪಿ ಪತ್ನಿ..!

ಉಡುಪಿ : ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಿದ ಘಟನೆ ಉಡುಪಿಯ ಅಜೆಕಾರಿನಲ್ಲಿ ನಡೆದಿದೆ.

ಕಾರ್ಕಳದ ಮರ್ಣೆ ನಿವಾಸಿ ಬಾಲಕೃಷ್ಣ (ಪತಿ) ಎಂಬುವವರನ್ನು ಪತ್ನಿ ಪ್ರತಿಮಾ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಪ್ರತಿಮಾಳ ಪ್ರಿಯಕರ ದಿಲೀಪ್ ಸಾಥ್ ನೀಡಿದ್ದಾನೆ ಎಂದು ಮೃತ ಬಾಲಕೃಷ್ಣನ ಕುಟುಂಬದವರು ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕೃಷ್ಣನಿಗೆ ಪತ್ನಿ ಪ್ರಿಯತಮೆ ಔಷಧಿ ಕೊಡುವ ನೆಪದಲ್ಲಿ ಸ್ಲೋ ಪಾಯ್ಸನ್ ನೀಡಿ ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಸದ್ಯ, ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಆರೋಪಿ ಪ್ರತಿಮಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...