ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಎಲ್ಲಾ ಬೆಳವಣಿಗೆಯ ನಂತರ ಅವರು ಭಾರತಕ್ಕೆ ಬಂದಿಳಿದಿದ್ದಾರೆ.
ಶೇಖ್ ಹಸೀನಾ ಅವರನ್ನು ಶೀಘ್ರದಲ್ಲೇ ನವದೆಹಲಿಯ ಸುರಕ್ಷಿತ ಮನೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ, ಅಲ್ಲಿ ಅವರು ಕೆಲವು ದಿನಗಳ ಕಾಲ ವಾಸಿಸಲಿದ್ದಾರೆ ಎಂದು ವರದಿ ತಿಳಿಸಿದೆ.ರಾಜೀನಾಮೆ ನೀಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸಂಜೆ 5.36 ಕ್ಕೆ ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಗೆ ಬಂದಿಳಿದರು. ಢಾಕಾದಿಂದ ಸೇನಾ ವಾಯುನೆಲೆಯ ಹೆಲಿಕಾಪ್ಟರ್ ಮೂಲಕ ಅವರು ದೆಹಲಿಯ ಹಿಂಡನ್ ಗೆ ಬಂದಿಳಿಸಿದರು. ವಾಯುಪಡೆಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಅವರು ಶೀಘ್ರವೇ ಲಂಡನ್ ಗೆ ಹಾರುವ ಸಾಧ್ಯತೆಯಿದೆ.
ಸೋಮವಾರ ಸಂಜೆ ಜನಸಮೂಹವು ಪ್ರಧಾನಿಯ ಅರಮನೆಗೆ ಪ್ರವೇಶಿಸುತ್ತಿದ್ದಂತೆ ಹಸೀನಾ ಹೆಲಿಕಾಪ್ಟರ್ ನಲ್ಲಿ ದೇಶದಿಂದ ಪಲಾಯನ ಮಾಡಿದರು. ಪ್ರತಿಭಟನಾಕಾರರು ಪ್ರಧಾನಿಯ ರಾಜೀನಾಮೆಯನ್ನು ಸಂಭ್ರಮಿಸುತ್ತಿದ್ದರೆ, ಬಾಂಗ್ಲಾದೇಶ ಸೇನೆಯು ಶೀಘ್ರದಲ್ಲೇ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಖಚಿತಪಡಿಸಿದೆ.