ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸಿಕಂದರಾಬಾದ್-ಶಾಲಿಮಾರ್ ಸೂಪರ್ ಫಾಸ್ಟ್ ರೈಲು ಹಳಿ ತಪ್ಪಿದ್ದು, ಭಾರಿ ಅವಘಡವೊಂದು ತಪ್ಪಿದೆ.
ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 22850) ನ ಕೆಲವು ಬೋಗಿಗಳು ಪಶ್ಚಿಮ ಬಂಗಾಳದ ಹೌರಾದ ನಲ್ಪುರ್ ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ಹಳಿ ತಪ್ಪಿವೆ.
ಇಂದು ಮುಂಜಾನೆ ಘಟನೆ ನಡೆದ್ದು, ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ . “ಬೆಳಿಗ್ಗೆ 5:31 ಕ್ಕೆ, ಸಿಕಂದರಾಬಾದ್-ಶಾಲಿಮಾರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಮಧ್ಯದ ಮಾರ್ಗದಿಂದ ಡೌನ್ ಲೈನ್ಗೆ ಹೋಗುವಾಗ ಹಳಿ ತಪ್ಪಿದೆ. ಒಂದು ಪಾರ್ಸೆಲ್ ವ್ಯಾನ್ ಮತ್ತು ಎರಡು ಪ್ರಯಾಣಿಕರ ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರ ಮುಂದಿನ ಪ್ರಯಾಣಕ್ಕಾಗಿ ಸುಮಾರು 10 ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.
VIDEO | West Bengal: Few coaches of 22850 Secundrabad-Shalimar Express derail in Howrah. More details awaited.
(Source: Third Party) pic.twitter.com/Sr3ltPVAqw
— Press Trust of India (@PTI_News) November 9, 2024