ಬ್ರೆಜಿಲ್ : ಏರ್ ಯುರೋಪ್ ಬೋಯಿಂಗ್ 787-9 ಡ್ರೀಮ್ ಲೈನರ್ ವಿಮಾನವು ಬಲವಾದ ಪ್ರಕ್ಷುಬ್ಧತೆಗೆ ಸಿಲುಕಿ ಬ್ರೆಜಿಲ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, 30 ಜನರು ಗಾಯಗೊಂಡಿದ್ದಾರೆ.
ಪ್ರಕ್ಷುಬ್ಧತೆಯು ಎಷ್ಟು ಪ್ರಬಲವಾಗಿತ್ತೆಂದರೆ, ಪ್ರಯಾಣಿಕರನ್ನು ತಮ್ಮ ಆಸನಗಳಿಂದ ಹಾರಿ ಬಿದ್ದಿದ್ದಾರೆ. ಒಬ್ಬ ವ್ಯಕ್ತಿ ಓವರ್ ಹೆಡ್ ಕಂಪಾರ್ಟ್ ಮೆಂಟಿನಲ್ಲಿ ಸಿಲುಕಿಕೊಂಡಿದ್ದರು.
ವಿಮಾನವು ಸ್ಪೇನ್ ನ ಮ್ಯಾಡ್ರಿಡ್ ನಿಂದ ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊಗೆ ತೆರಳುತ್ತಿದ್ದಾಗ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸ್ಪ್ಯಾನಿಷ್ ವಿಮಾನಯಾನ ಸಂಸ್ಥೆ ತಿಳಿಸಿದೆ. ಪ್ರಕ್ಷುಬ್ಧತೆಯ ನಂತರ ಯುಎಕ್ಸ್ 045 ವಿಮಾನವನ್ನು ಈಶಾನ್ಯ ಬ್ರೆಜಿಲ್ನ ನೇಟಾಲ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ . ಪ್ರಕ್ಷುಬ್ಧತೆಯಿಂದ ಉಂಟಾದ ಹಾನಿ ಮತ್ತು ನಂತರದ ಪರಿಣಾಮಗಳ ವೀಡಿಯೊಗಳನ್ನು ಪ್ರಯಾಣಿಕರು ಪೋಸ್ಟ್ ಮಾಡಿದ್ದಾರೆ.