‘ನವದೆಹಲಿ : ಕೇಂದ್ರ ಬಜೆಟ್ ಗೂ ಮುನ್ನವೇ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಏರಿಕೆಯಾಗಿದೆ.
ಹೌದು, ಕೇಂದ್ರ ಬಜೆಟ್ ಕೆಲವೇ ಗಂಟೆಗಳ ಮೊದಲು, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ 10:10ರ ವೇಳೆಗೆ ಸೆನ್ಸೆಕ್ಸ್ 193 ಅಂಕ ಅಥವಾ ಶೇ. 0.25ರಷ್ಟು ಏರಿಕೆ ಕಂಡಿದ್ದು 77689.28ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 50ಯು 44 ಅಂಕ ಅಥವಾ ಶೇ. 0.19ರಷ್ಟು ಮೇಲೇರಿ 23555ರಲ್ಲಿ ವಹಿವಾಟು ಮುಂದುವರಿಸಿದೆ.
ಹಿಂದಿನ ವಾರಗಳಲ್ಲಿ ನಷ್ಟದ ನಂತರ ಷೇರು ಮಾರುಕಟ್ಟೆಗಳು ಹಿಂದಿನ ದಿನದ ವ್ಯಾಪಾರವನ್ನು ಕೆಲವು ಪ್ರಮುಖ ಲಾಭಗಳೊಂದಿಗೆ ಕೊನೆಗೊಳಿಸಿದವು. ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಎರಡೂ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡವು.