ಷೇರುಪೇಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ದಾಖಲೆಯ ಏರಿಕೆ ಕಂಡಿದ್ದು, ಹೂಡಿಕೆದಾರರಿಗೆ ಭರ್ಜರಿ 7 ಲಕ್ಷ ಕೋಟಿ ರೂ.ಲಾಭವಾಗಿದೆ.
ಹೌದು, ಬ್ಯಾಂಕುಗಳು ಮತ್ತು ಐಟಿ ಷೇರುಗಳಿಂದ ಭಾರತೀಯ ಷೇರುಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 ದಾಖಲೆಯ ಗರಿಷ್ಠ 25,337 ಅಂಕಗಳನ್ನು ತಲುಪಿದರೆ, ಬಿಎಸ್ಇ ಸೆನ್ಸೆಕ್ಸ್ ಸಹ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ನಿಫ್ಟಿ ಶೇಕಡಾ 1.7 ರಷ್ಟು ಏರಿಕೆ ಕಂಡರೆ, ಸೆನ್ಸೆಕ್ಸ್ ಶೇಕಡಾ 1.5 ರಷ್ಟು ಏರಿಕೆಯಾಗಿದೆ. ಬಿಎಸ್ಇಯಲ್ಲಿ ಎಲ್ಲಾ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 6.6 ಲಕ್ಷ ಕೋಟಿ ರೂ.ಗಳಿಂದ 467.36 ಲಕ್ಷ ಕೋಟಿ ರೂ.ಗೆ ಏರಿದೆ.
ಐಟಿ ಕಂಪನಿಗಳು ಶೇಕಡಾ 1 ರಷ್ಟು ಏರಿಕೆ ಕಂಡರೆ, ನಿಫ್ಟಿ ಬ್ಯಾಂಕ್, ಆಟೋ, ಹಣಕಾಸು ಸೇವೆಗಳು, ಹೆಲ್ತ್ಕೇರ್ ಮತ್ತು ತೈಲ ಮತ್ತು ಅನಿಲ ವಲಯಗಳು ಶೇಕಡಾ 1 ಕ್ಕಿಂತ ಹೆಚ್ಚು ಲಾಭವನ್ನು ಕಂಡವು. ಭಾರ್ತಿ ಏರ್ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಇನ್ಫೋಸಿಸ್ ಒಟ್ಟಾಗಿ ಸೆನ್ಸೆಕ್ಸ್ ಏರಿಕೆಗೆ ಸುಮಾರು 500 ಪಾಯಿಂಟ್ಗಳನ್ನು ಸೇರಿಸಿದವು. ಎಲ್ &ಟಿ, ಎಂ & ಎಂ, ಎನ್ ಟಿಪಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಎಸ್ ಬಿಐ ಕೂಡ ಸೂಚ್ಯಂಕದ ಏರಿಕೆಗೆ ಗಮನಾರ್ಹ ಕೊಡುಗೆ ನೀಡಿವೆ.