ಷೇರುಪೇಟೆಯಲ್ಲಿ ಸೆನ್ಸೆಕ್ಸ್ 500 ಅಂಕ ಜಿಗಿತ ಕಂಡಿದ್ದು, ನಿಫ್ಟಿ 25,000 ಗಡಿ ದಾಟಿದೆ. ಈ ಮೂಲಕ ಹೂಡಿಕೆದಾರರು ಭರ್ಜರಿ ಲಾಭ ಗಳಿಸಿದ್ದಾರೆ.
ಬೆಳಗ್ಗೆ 10:20 ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ 409.75 ಪಾಯಿಂಟ್ಸ್ ಏರಿಕೆಗೊಂಡು 81,791.11 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 126.45 ಪಾಯಿಂಟ್ಸ್ ಏರಿಕೆಗೊಂಡು 25,090.70 ಕ್ಕೆ ತಲುಪಿದೆ. ಕೋಲ್ ಇಂಡಿಯಾ, ಎಲ್ ಅಂಡ್ ಟಿ, ವಿಪ್ರೋ, ಶ್ರೀರಾಮ್ ಫೈನಾನ್ಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ನಿಫ್ಟಿ 50 ನಲ್ಲಿ ಲಾಭ ಗಳಿಸಿದ ಮೊದಲ ಐದು ಷೇರುಗಳಾಗಿವೆ.
ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್, ಸಿಪ್ಲಾ, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್ ಸರ್ವ್ ನಷ್ಟ ಅನುಭವಿಸಿದ ಷೇರುಗಳಾಗಿವೆ.ಕ್ಯೂ 2 ಗಳಿಕೆಯನ್ನು ವರದಿ ಮಾಡಿದ ನಂತರ ಬ್ರೋಕರೇಜ್ ಸಂಸ್ಥೆಗಳಿಂದ ಅನೇಕ ಡೌನ್ಗ್ರೇಡ್ಗಳನ್ನು ಪಡೆದ ನಂತರ ಡಿಮಾರ್ಟ್ ಷೇರುಗಳು ಶೇಕಡಾ 9 ರಷ್ಟು ಕುಸಿದವು.