ನವದೆಹಲಿ : ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 393.01 ಅಂಕ ಕುಸಿತಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟದ ಭೀತಿ ಎದುರಾಗಿದೆ.
ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 393.01 ಪಾಯಿಂಟ್ ಕುಸಿದು 75,546.17 ಕ್ಕೆ ತಲುಪಿದೆ. ನಿಫ್ಟಿ 118.95 ಪಾಯಿಂಟ್ ಕುಸಿದು 22,813.95 ಕ್ಕೆ ತಲುಪಿದೆ. ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಅಸ್ಥಿರ ವಹಿವಾಟಿನಲ್ಲಿ ಅಲ್ಪ ಕುಸಿತ ಕಂಡವು.