ಬೆಂಗಳೂರು : ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ವಸತಿ ಶಾಲೆಗಳಲ್ಲಿ ಏಕರೂಪವಾಗಿ 01 ರಿಂದ 04 ಮತ್ತು 06 ರಿಂದ 07ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಿ. ನಿಯಮಾನುಸಾರ ಮೌಲ್ಯಾಂಕನ ಮಾಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ವಾರ್ಷಿಕ ಪರೀಕ್ಷೆಯನ್ನು ನಡೆಸಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಂದು ಫಲಿತಾಂಶ ಘೋಷಣೆ ಮಾಡಲು ತಿಳಿಸಿದೆ. 2023-24ನೇ ಸಾಲಿನ 01 ರಿಂದ 04 ಮತ್ತು 06 ರಿಂದ 07ನೇ ತರಗತಿಯವರೆಗಿನ ವಾರ್ಷಿಕ ವೇಳಾಪಟ್ಟಿ ಹೀಗಿದೆ.
1 ರಿಂದ 4ನೇ ತರಗತಿ
25-03-2024, ಪ್ರಥಮ ಭಾಷೆ – ಕನ್ನಡ, ಉರ್ದು, ಇಂಗ್ಲೀಷ್
26-03-2024, ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ
27-03-2024, ಗಣಿತ
28-03-2024, ಪರಿಸದ ಅಧ್ಯಯನ
6-7 ನೇ ತರಗತಿ
22-03-2024, ಪ್ರಥಮ ಭಾಷೆ – ಕನ್ನಡ, ಉರ್ದು, ಇಂಗ್ಲೀಷ್
23-03-2024, ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ
25-03-202, ತೃತೀಯ ಭಾಷೆ – ಹಿಂದಿ, ಕನ್ನಡ, ಉರ್ದು, ಇಂಗ್ಲೀಷ್
26-03-2024, ಗಣಿತ
27-03-2024, ವಿಜ್ಞಾನ
28-03-2024, ಸಮಾಜ ವಿಜ್ಞಾನ
30-03-2024, ದೈಹಿಕ ಶಿಕ್ಷಣ
ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳು
1) ಆಯಾ ತರಗತಿ ಮತ್ತು ವಿಷಯಕ್ಕೆ ನಿಗಧಿಪಡಿಸಿದ ಎಸ್ಎ-1ರ ಮೌಲ್ಯಮಾಪನಕ್ಕೆ ಪರಿಗಣಿಸಿದ ನಂತರ ಉಳಿದ ಶೇಕಡ 50 ರಷ್ಟು ಪಠ್ಯವನ್ನು ಪರಿಗಣಿಸುವುದು.
2) ಮಧ್ಯಾಹ್ನದ ಅವಧಿಯಲ್ಲಿ ಎಲ್ಲಾ ತರಗತಿಗಳಿಗೆ ಮೌಖಿಕ ಪರೀಕ್ಷೆ ನಡೆಸುವುದು.
3) ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ಶಾಲಾ ಹಂತದಲ್ಲಿಯೇ ಆಯಾ ವಿಷಯ ಶಿಕ್ಷಕರಿಂದ ನಿಯಮಾನುಸಾರ ಸಿದ್ಧಪಡಿಸಿ, ಪರೀಕ್ಷೆ ನಡೆಸಲು ಕ್ರಮವಹಿಸುವುದು.
4) ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಲ್ಲಿ ಮಾತ್ರ ಪರೀಕ್ಷಾ ದಿನಾಂಕಗಳಂದು ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು.
5) ಪರೀಕ್ಷೆಯ ನಂತರ ಈ ಎಸ್.ಎ-2ನ ಅಂಕಗಳು ಹಾಗೂ ಹಿಂದಿನ ಎಫ್ಎ1, ಎಫ್2, ಎಫ್ಎಂ ಮತ್ತು ಎಫ್ಎ4 ಹಾಗೂ ಎಸ್ಎ-1ರ ಎಲ್ಲಾ ದತ್ತಾಂಶಗಳನ್ನು ಎಸ್.ಎ.ಟಿ.ಎಸ್.ನಲ್ಲಿ ಕಡ್ಡಾಯವಾಗಿ ದಿನಾಂಕ: 06-04-2024ರೊಳಗಾಗಿ ಪೂರ್ಣಗೊಳಿಸಿ, ಪ್ರತಿ ವಿದ್ಯಾರ್ಥಿಯ ಮುಂಬಡ್ತಿಗೆ ಕ್ರಮವಹಿಸುವುದು.