ಯಾದಗಿರಿ : ಯಾದಗಿರಿಯಲ್ಲಿ ಹೊಸ ವರ್ಷದ ದಿನವೇ ನೆತ್ತರು ಹರಿದಿದ್ದು, ಕತ್ತು ಕೊಯ್ದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಚಗಿಂಡಾಳ್ ಎಂಬಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಶರಣಪ್ಪ ಮೇಟಿ (29) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕುತ್ತಿಗೆಗೆ ಚಾಕು ಇರಿದು ಶರಣಪ್ಪ ಮೇಟಿಯನ್ನು ಕೊಲೆ ಮಾಡಲಾಗಿದ್ದು, ಅನೈತಿಕ ಸಂಬಂಧದ ದ್ವೇಷಕ್ಕೆ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಸುರಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೇಸ್ ದಾಖಲಿಸಿಕೊಂಡಿದ್ದಾರೆ.