ಬೆಂಗಳೂರು : ರಾಜ್ಯ ಸರ್ಕಾರದ ಮಂತ್ರಿ, ಶಾಸಕರ ವೇತನ ಹೆಚ್ಚಳ ಮಾಡುವ ಸಂಬಂಧ ವಿಧಾನಸಭೆಯಲ್ಲಿ ಭತ್ಯೆ ತಿದ್ದುಪಡಿ ವಿಧೇಯಕವನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ.
ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಧೇಯಕ ಮಂಡಿಸಿದ್ದಾರೆ. ಶಾಸಕರು, ಸಚಿವರು, ಸಿಎಂ , ಸಭಾಪತಿಗಳ ಸಂಬಳ ಹೆಚ್ಚಳ ಮಾಡುವ ವಿಧೇಯಕವನ್ನು ಮಂಡಿಸಿದ್ದಾರೆ.
ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ, ಸಚಿವರು, ವಿಧಾನ ಮಂಡಲ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರ ಈಗಿರುವ ವೇತನವನ್ನು ಎರಡು ಪಟ್ಟು ಹೆಚ್ಚಳ ಮಾಡುವ ಕರ್ನಾಟಕ ಶಾಸಕಾಂಗದ ವೇತನ ಪಿಂಚಣಿ ಮತ್ತು ಭತ್ಯೆ(ತಿದ್ದುಪಡಿ) ವಿಧೇಯಕ-2025ಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದರು. ಇಂದು ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ವಿಧೇಯಕ ಮಂಡಿಸಿದೆ.
ಮುಖ್ಯಮಂತ್ರಿಗಳಿಗೆ 1.50 ಲಕ್ಷ ರೂ
ಸಚಿವರುಗಳಿಗೆ 1.25 ಲಕ್ಷ ರೂ.ಗೆ ವೇತನ ಹೆಚ್ಚಳ
ಶಾಸಕರಿಗೆ 80 ಸಾವಿರ ರೂ.,
ವಿಪಕ್ಷ ನಾಯಕರಿಗೆ 80 ಸಾವಿರ ರೂ.,
ಸಚಿವರ ಮನೆ ಬಾಡಿಗೆ ಭತ್ಯೆ 2.50 ರೂ.,
ಮಾಜಿ ಶಾಸಕರ ಪಿಂಚಣಿ 50,000 ದಿಂದ 75000 ರೂ.ಗೆ ಏರಿಕೆಯಾಗಲಿದೆ.
ಕ್ಷೇತ್ರ ಪ್ರವಾಸ ಭತ್ಯೆ 60 ಸಾವಿರ ರೂ.ಗೆ, ರೈಲು,
ರೈಲು, ವಿಮಾನ ಟಿಕೆಟ್ ( ವಾರ್ಷಿಕ) – 2.50 ಲಕ್ಷದಿಂದ 3.50 2 ಲಕ್ಷ
ಸಿಎಂ. ಸಚಿವರ ಅತಿಥಿ ಭತ್ಯೆ – 4.50 ಲಕ್ಷದಿಂದ 5 ಲಕ್ಷ
ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ
ರಾಜ್ಯ ಸಚಿವರ ವೇತನ – 50,000 ದಿಂದ 70 ಸಾವಿರ
ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2 ಲಕ್ಷ
