ಸಿನಿಮಾ ಡೆಸ್ಕ್ : ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಡಾ. ಸೂರಿ ನಿರ್ದೇಶನದ ಶ್ರೀ ಮುರಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಭರ್ಜರಿ ಸೌಂಡ್ ಮಾಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸದ್ಯ, ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದೆ. ಸಿನಿಮಾದಲ್ಲಿ ನಟ ಮುರುಳಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಶ್ರೀ ಮುರಳಿ ಸೇರಿದಂತೆ ರುಕ್ಮಿಣಿ ವಸಂತ್, ಪ್ರಕಾಶ್ ರಾಜ್. ರಂಗಾಯಣ ರಘು. ಅಚ್ಯುತ್ ಕುಮಾರ್. ಬಣ್ಣ ಹಚ್ಚಿದ್ದಾರೆ. ಬಿ. ಅಜನೇಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಪ್ರಣವ್ ಶ್ರೀ ಪ್ರಸಾದ್ ಸಂಕಲನ, ಚೇತನ್ ಡಿಸೋಜಾ ಸಾಹಸ ನಿರ್ದೇಶನ, ಆದರ್ಶ, ಸ್ವರೂಪ್, ಹಾಗೂ ಸಮಂತ್ ಅವರ ಛಾಯಾಗ್ರಾಹಣವಿದೆ. ಅಕ್ಟೋಬರ್ 31 ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.