ಬೆಂಗಳೂರು : ಯುಜಿಸಿ ವೇತನ ಶ್ರೇಣಿಯಲ್ಲಿ ಪಿಂಚಣಿ ಪಡೆಯತ್ತಿರುವ ನಿವೃತ್ತ ಸಿಬ್ಬಂದಿಗಳಿಗೆ ಪಿಂಚಣಿ ಪರಿಷ್ಕರಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಆದೇಶದನ್ವಯ ದಿನಾಂಕ:01/04/2012 ರಿಂದ 31/12/2015ರ ಅವಧಿಯಲ್ಲಿ ನಿವೃತ್ತಿ ಹೊಂದಿದ್ದು ಯುಜಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿದ್ದ ಸಿಬ್ಬಂದಿಗಳಿಗೆ ಪಿಂಚಣಿ ಸೌಲಭ್ಯಗಳ ಲೆಕ್ಕಾಚಾರಕ್ಕೆ Corrective Factor ಅನ್ನು 1.839 ಗೆ ಬದಲಾಗಿ 1.6 ಎಂದು ಪರಿಗಣಿಸಿ ಪಿಂಚಣಿ ಪರಿಷ್ಕರಣೆ ಸಂಬಂಧ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ.
ಆದ್ದರಿಂದ ಪ್ರಾದೇಶಿಕ ಜಂಟಿ ನಿರ್ದೇಶಕರುಗಳಿಗೆ ಈ ಮೂಲಕ ಸೂಚನೆ ನೀಡುವುದೇನೆಂದರೆ, ತಮ್ಮ ಕಛೇರಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ, ಯುಜಿಸಿ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ:01/04/2012 ರಿಂದ 31/12/2015ರ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಸಿಬ್ಬಂದಿಗಳ ಮಾಹಿತಿಗಳನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ MS Excel ತಂತ್ರಾಂಶದಲ್ಲಿ (ಆಂಗ್ಲಭಾಷೆಯಲ್ಲಿ) ನಮೂದಿಸಿ, ಸದರಿ ಸಿಬ್ಬಂದಿಗಳ ಸೇವಾಪುಸ್ತಕ ಹಾಗೂ ಮಹಾಲೇಖಪಾಲರ ಪಿಂಚಣಿ ಮಂಜೂರಾತಿ ಆದೇಶದ ಪ್ರತಿಗಳೊಂದಿಗೆ ಈ ಕಛೇರಿಗೆ ದಿನಾಂಕ:27/11/2023ರೊಳಗಾಗಿ ಸಲ್ಲಿಸುವುದು. MS Excel ತಂತ್ರಾಂಶದಲ್ಲಿ ನಮೂದಿಸಲಾಗಿರುವ ಮಾಹಿತಿಗಳ ಸಾಫ್ಟ್ ಪ್ರತಿಯನ್ನು dce.pension@gmail.com ಗೆ ರವಾನಿಸುವುದು.
ಸರ್ಕಾರದ ಆದೇಶದನ್ವಯ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಈ ಬಗ್ಗೆ ವಿಳಂಬಕ್ಕೆ ಆಸ್ಪದ ನೀಡದ ನಿಗದಿತ ದಿನಾಂಕದೊಳಗಾಗಿ ಮಾಹಿತಿಗಳನ್ನು ಹಾಗೂ ದಾಖಲಾತಿಗಳನ್ನು ಈ ಕಛೇರಿಗೆ ಸಲ್ಲಿಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.