ಚಿಕ್ಕಬಳ್ಳಾಪುರ : 20,000 ಲಂಚ ಪಡೆಯತ್ತಿದ್ದ ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಕಂದಾಯ ಅಧಿಕಾರಿ ಅರುಣ್ ವ್ಯಕ್ತಿಯೋರ್ವರಿಂದ 20,000 ಲಂಚ ಪಡೆಯತ್ತಿದ್ದ ವೇಳೆಗೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದಿದ್ದಾರೆ.
ಸದ್ಯ, ಅರುಣ್ ರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.