alex Certify BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ‘ಡಿ ಗ್ಯಾಂಗ್’ ವಿರುದ್ಧ ಕೋರ್ಟ್ ಗೆ 4800 ಪುಟಗಳ ‘ಚಾರ್ಜ್ ಶೀಟ್’ ಸಲ್ಲಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ‘ಡಿ ಗ್ಯಾಂಗ್’ ವಿರುದ್ಧ ಕೋರ್ಟ್ ಗೆ 4800 ಪುಟಗಳ ‘ಚಾರ್ಜ್ ಶೀಟ್’ ಸಲ್ಲಿಕೆ..!

ಬೆಂಗಳೂರು: ನಟ ದರ್ಶನ್ ಗ್ಯಾಂಗ್ ನಿಂದ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು ಇಂದು ಕೋರ್ಟ್ ಗೆ 4800 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಕೊಲೆ ಪ್ರಕರದ ತನಿಖೆ ಪೂರ್ಣಗೊಳಿಸಿದ ಪೊಲೀಸರು ಚಾರ್ಜ್ ಶೀಟ್ ಸಿದ್ಧಪಡಿಸಿದ್ದು, ಖುದ್ದು ಕಮಿಷನರ್ ಅವರಿಂದಲೇ ದೋಷಾರೋಪ ಪಟ್ಟಿ ಪ್ರತಿಗಳ ಪರಿಶೀಲನೆ ನಡೆಸಲಾಗಿದೆ. ಸಾಕ್ಷ್ಯ, ಎಫ್ಎಸ್ಎಲ್ ವರದಿ ಸೇರಿ ಪ್ರತಿಯೊಂದು ಕೂಡ ಕೊಲೆಗೆ ಪೂರಕವಾಗಿವೆ. 4,800ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ರೇಣುಕಾಸ್ವಾಮಿ ಹತ್ಯೆಯ ಕುರಿತಾಗಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಿದ್ದಪಡಿಸಲಾಗಿದೆ. ದೊಡ್ಡ ಬಾಕ್ಸ್ ನಲ್ಲಿ ಚಾರ್ಜ್ ಶೀಟ್ ತೆಗೆದುಕೊಂಡ ಹೋದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಎಸಿಪಿ ಚಂದನ್ ಕುಮಾರ್ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...