ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ ಕೇಂದ್ರ ಬ್ಯಾಂಕಿನ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಮುಖ ರೆಪೊ ದರವನ್ನು ಶೇಕಡಾ 6.5 ಕ್ಕೆ ಸ್ಥಿರವಾಗಿಡಲು ನಿರ್ಧರಿಸಿದೆ ಎಂದು ಹೇಳಿದರು.
ಪ್ರಮುಖ ರೆಪೊ ದರವನ್ನು ಶೇಕಡಾ 6.5 ಕ್ಕೆ ಉಳಿಸಿಕೊಳ್ಳುವ ನಿರ್ಧಾರವು 6 ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಆರನೇ ಬಾರಿಗೆ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿಡಲು ಆಯ್ಕೆ ಮಾಡಿದೆ.
ಆರ್ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿ ಮೂರು ದಿನಗಳ ಸಭೆ ಫೆಬ್ರವರಿ 8ರಂದು ಇಂದು ಕೊನೆಯಾಗಲಿದೆ.ಕಳೆದ ಐದು ಸಭೆಗಳಿಂದ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುತ್ತಿದೆ. ಈ ಬಾರಿಯೂ 6.5ರ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. 2023ರ ಫೆಬ್ರವರಿಯಲ್ಲಿ ಕೊನೆಯದಾಗಿ ರೆಪೊ ದರದಲ್ಲಿ ಬದಲಾವಣೆ ಮಾಡಲಾಗಿತ್ತು,