ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಅದ್ಬುತ ಪ್ರದರ್ಶನ ನೀಡ್ತಿದೆ. ಭಾರತೀಯ ಕುಸ್ತಿಪಟು ರವಿ ದಹಿಯಾ ಫೈನಲ್ ಪ್ರವೇಶ ಮಾಡಿದ್ದಾರೆ. 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ, ಕಜಕಿಸ್ತಾನದ ಸನಾಯೆವ್ ನುರಿಸ್ಲಾಮ್ ಅವರನ್ನು ಸೋಲಿಸಿದ ರವಿ ಫೈನಲ್ ಪ್ರವೇಶ ಮಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಬರುವುದು ಖಚಿತವಾಗಿದೆ. ಭಾರತಕ್ಕೆ ಟೊಕಿಯೊ ಒಲಂಪಿಕ್ಸ್ ನಲ್ಲಿ ಮೊದಲ ಚಿನ್ನದ ಪದಕವನ್ನು ರವಿ ತಂದುಕೊಡ್ತಾರಾ ನೋಡಬೇಕಿದೆ. ರವಿ ಮೇಲೆ ಭಾರತೀಯರ ನಿರೀಕ್ಷೆ ಹೆಚ್ಚಿದೆ.
ವರ್ಷದ ಬಳಿಕವೂ ಕಾರ್ಯ ನಿರ್ವಹಿಸುತ್ತಿತ್ತು ನೀರಿನಲ್ಲಿ ಬಿದ್ದ ಮೊಬೈಲ್
ದಹಿಯಾ ಮೊದಲು, ಸುಶೀಲ್ ಕುಮಾರ್ (2008, 2012), ಯೋಗೇಶ್ವರ್ ದತ್ (2012) ಮತ್ತು ಸಾಕ್ಷಿ ಮಲಿಕ್ (2016) ಕುಸ್ತಿಯಲ್ಲಿ ಪದಕ ಗೆದ್ದಿದ್ದಾರೆ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಸಾಕ್ಷಿ ಮತ್ತು ಯೋಗೇಶ್ವರ್ ಕಂಚಿನ ಪದಕ ಗೆದ್ದಿದ್ದಾರೆ.