alex Certify BREAKING : ‘ರಾಮೇಶ್ವರಂ ಕೆಫೆ’ ಬ್ಲಾಸ್ಟ್ ಕೇಸ್ : ಜೈಲಿನಲ್ಲಿದ್ದ ಆರೋಪಿ ಮಾಜ್ ಮುನೀರ್ ‘NIA’ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ರಾಮೇಶ್ವರಂ ಕೆಫೆ’ ಬ್ಲಾಸ್ಟ್ ಕೇಸ್ : ಜೈಲಿನಲ್ಲಿದ್ದ ಆರೋಪಿ ಮಾಜ್ ಮುನೀರ್ ‘NIA’ ವಶಕ್ಕೆ

ಬೆಂಗಳೂರು : ಬೆಂಗಳೂರಿನ ‘ ರಾಮೇಶ್ವರಂ ಕೆಫೆ’ ಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ‘ಮಾಝ್ ಮುನೀರ್’ ನನ್ನು 7 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ ಕೇಸ್, ಮಂಗಳೂರಿನ ಗೋಡೆ ಬರಹ ಪ್ರಕರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಝ್ ಮುನೀರ್ ಗೂ ಬೆಂಗಳೂರಿನ ‘ ರಾಮೇಶ್ವರಂ ಕೆಫೆ’ ಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ನಂಟು ಇದೆ ಎಂದು ಎನ್ ಐ ಎ ಅಧಿಕಾರಿಗಳು ಶಂಕಿಸಿ ಆತನನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದರು.

ಅಂತೆಯೇ ಕೋರ್ಟ್ ಪರಪ್ಪನ ಅಗ್ರಹಾರದಲ್ಲಿದ್ದ ‘ ಮಾಝ್ ಮುನೀರ್’ ನನ್ನು 7 ದಿನ NIA ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಓರ್ವನನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಬಳ್ಳಾರಿ ಮೂಲದ ಶಬ್ಬೀರ್ ನನ್ನು ವಶಕ್ಕೆ ಪಡೆದ ಎನ್ ಐ ಎ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿ ನಂತರ ಬಿಟ್ಟು ಕಳುಹಿಸಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...