ರಾಮನಗರ : ರಾಮನಗರ ಮತ್ತೆ ಬೆಂಗಳೂರು ಜಿಲ್ಲೆಗೆ ಸೇರ್ಪಡೆ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಕನಕಪುರ ತಾಲೂಕಿನ ಶಿವನಹಳ್ಳಿಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾ ಪೂಜಾ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಿ ಮಾತನಾಡಿದರು.
ರಾಮನಗರವನ್ನು ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರು ನಾಮಕರಣ ಮಾಡುತ್ತೇವೆ. ಇನ್ನೂ, ರಾಮನಗರ ಜಿಲ್ಲೆಯಲ್ಲ, ಅದು ಬೆಂಗಳೂರಿಗೆ ಸೇರುತ್ತದೆ ಎಂದು ಹೇಳಿದ್ದಾರೆ.ರಾಮನಗರವನ್ನು ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡಿದ ಡಿಸಿಎಂ ಡಿಕೆಶಿ ರಾಮನಗರ ಇಲ್ಲ, ಬೆಂಗಳೂರು ಅಷ್ಟೇ ಎಂದು ಡಿಕೆಶಿ ಘೋಷಿಸಿದ್ದಾರೆ. ಅಲ್ಲದೇ ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಹೀಗಾಗಿ ನಾವು ಜಾತಿ, ಮತ, ಪಂಥ ಮರೆತು ಮಾನವ ಧರ್ಮದ ನೆಲೆಯಲ್ಲಿ ಮನುಷ್ಯರಾಗಿ ಬದುಕಬೇಕು. ಶ್ರೀ ವೀರಭದ್ರಸ್ವಾಮಿ ಸ್ವಾಮಿಯ ಇತಿಹಾಸ ಹಿರಿದಾಗಿದ್ದು, ಸ್ವಾಮಿಯ ಕೃಪೆ ನಮ್ಮ ಮೇಲಿದೆ. ಈ ಸನ್ನಿಧಿಗೆ ಬರುವ ಭಕ್ತರಿಗೆ ದೇವರು ಒಳಿತು ಮಾಡಲಿ, ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ದಸರಾ ಶುಭಾಶಯ ಕೋರಿದ ಡಿಸಿಎಂ
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಒಳ್ಳೆ ಮಳೆ-ಬೆಳೆಯಿಂದ ರೈತರ ಬಾಳು ಹಸನಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.