ನವದೆಹಲಿ : ಕೇಂದ್ರ ಚುನಾವಣಾ ಆಯುಕ್ತರಾಗಿ ರಾಜೇಶ್ ಕುಮಾರ್ ಗುಪ್ತಾ, ಪ್ರಿಯಾಂಶ್ ಶರ್ಮಾ ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂಬ ನೋಟಿಫಿಕೇಶನ್ ಕಾಫಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನಕಲಿ ಎಂಬುದು ಸ್ಪಷ್ಟವಾಗಿದೆ.
ರಾಜೇಶ್ ಕುಮಾರ್ ಗುಪ್ತಾ ಹಾಗೂ ಪ್ರಿಯಾಂಶ್ ಶರ್ಮ ಅವರನ್ನು ಚುನಾವಣಾ ಅಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ನೋಟಿಫಿಕೇಶನ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಆದರೆ, ಇದು ಫೇಕ್ನ್ಯೂಸ್ ಎಂದು ಪಿಐಬಿ ಖಚಿತಪಡಿಸಿದೆ. ಪಿಐಬಿ ಇದು ಸುಳ್ಳು ಸುದ್ದಿ ಎಂದಿದ್ದು, ಇಂಥ ಯಾವುದೇ ನೋಟಿಫಿಕೇಶನ್ ನೀಡಲಾಗಿಲ್ಲ ಎಂದಿದೆ.
ಚುನಾವಣಾ ಆಯುಕ್ತರಾಗಿದ್ದ ಅನೂಪ್ ಚಂದ್ರ ಪಾಂಡೆ ನಿವೃತ್ತರಾಗಿದ್ದರೆ, ಅರುಣ್ ಗೋಯೆಲ್ ಕೆಲ ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ಹಠಾತ್ ಆಗಿ ರಾಜೀನಾಮೆ ನೀಡಿದ್ದರು. ಅನೂಪ್ ಚಂದ್ರ ಪಾಂಡೆ ಫೆಬ್ರವರಿ 15ರಂದು ನಿವೃತ್ತರಾಗಿದ್ದರೆ, ಅರುಣ್ ಗೋಯೆಲ್ ಮಾರ್ಚ್ 9 ರಂದು ರಾಜೀನಾಮೆ ನೀಡಿದ್ದರು. ನೂತನ ಕೇಂದ್ರ ಚುನಾವಣಾ ಆಯುಕ್ತರನ್ನು ಮಾ.15 ರಂದು ನೇಮಕ ಮಾಡುವ ಸಾಧ್ಯತೆಯಿದೆ.