ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸೋಲಾಪುರದಲ್ಲಿ ಪಿಎಂ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಭಾವುಕರಾದರು.
ಈ ಯೋಜನೆಯಡಿ, ಭಾರತದ ಅತಿದೊಡ್ಡ ಹೌಸಿಂಗ್ ಸೊಸೈಟಿಯನ್ನು ಉದ್ಘಾಟಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
“ನಾನು ನನ್ನ ಬಾಲ್ಯದಲ್ಲಿ ಇಲ್ಲಿಗೆ ಬಂದಿದ್ದೆ, ನನ್ನ ಬಾಲ್ಯದಲ್ಲಿ ಈ ರೀತಿಯ ಮನೆಯಲ್ಲಿ ವಾಸಿಸಲು ನನಗೂ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ನಾನು ಭಾವಿಸಿದೆ” ಎಂದು ಮೋದಿ ಹೇಳಿದರು. ಈ ವೇಳೆ ಪ್ರಧಾನಿ ಮೋದಿ ಭಾವುಕರಾದರು.
ಸೋಲಾಪುರದ ಸಾವಿರಾರು ಬಡವರು ಮತ್ತು ಕಾರ್ಮಿಕರಿಗಾಗಿ ನಾವು ತೆಗೆದುಕೊಂಡ ಪ್ರತಿಜ್ಞೆ ಇಂದು ಈಡೇರುತ್ತಿದೆ ಎಂದು ನನಗೆ ಬಹಳ ಸಂತೋಷವಾಗುತ್ತಿದೆ. ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ನಾನು ಇಲ್ಲಿಗೆ ಬಂದ ದಿನ, ನಿಮ್ಮ ಮನೆಗಳ ಬೀಗದ ಕೀ ನೀಡಲು ನಾನು ಶೀಘ್ರದಲ್ಲೇ ಬರುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಿದ್ದೆ” ಎಂದು ಪ್ರಧಾನಿ ಹೇಳಿದರು.

ಇಂದು, ಮೋದಿ ಈ ಭರವಸೆಯನ್ನು ಈಡೇರಿಸಿದ್ದಾರೆ. ನೆನಪಿಡಿ, ಮೋದಿಯವರ ಗ್ಯಾರಂಟಿ ಎಂದರೆ ‘ಗ್ಯಾರಂಟಿ ಕೆ ಪೂರಾ ಹೋನೆ ಕಿ ಗ್ಯಾರಂಟಿ’!” ಎಂದು ಅವರು ಹೇಳಿದರು.